ಪ್ರಸಾದ್ ಸ್ಟುಡಿಯೋದಲ್ಲಿ ?ನಾನು ನನ್ನ ಕನಸು
Posted date: 19/April/2010

ಡ್ಯುಯೆಟ್ ಮೂವೀಸ್ ಹಾಗೂ ಮೀಡಿಯಾ ಹೌಸ್ ಸ್ಟೂಡಿಯೋ ಲಾಂಛನದಲ್ಲಿ ಪ್ರಕಾಶ್ ರೈ, ಬಿ.ಸುರೇಶ್ ಮತ್ತು ಶೈಲಜಾನಾಗ್ ನಿರ್ಮಿಸುತ್ತಿರುವ ‘ನಾನು ನನ್ನ ಕನಸು ಚಿತ್ರಕ್ಕೆ ಪ್ರಸಾದ್ ಸ್ಟುಡಿಯೋದಲ್ಲಿ ಹಿನ್ನಲೆ ಸಂಗೀತ ಅಳವಡಿಸಲಾಗುತ್ತಿದೆ.  
    ಕರ್ನಾಟಕದ ಜೀವನದಿ ಕಾವೇರಿಯ ಉಗಮ ಸ್ಥಳವಾದ ಭಾಗಮಂಡಲ, ಚಿಕ್ಕಮಗಳೂರಿನ ಬಾಬಬುಡನಗಿರಿ, ತೆಳಗೂರು ಟೀ ಎಸ್ಟೆಟ್, ಸಕಲೇಶಪುರ,  ಶನಿವಾರಸಂತೆ ಹಾಗೂ ಮಡಿಕೇರಿಯಂತ ಸೊಬಗಿನ ತಾಣಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ ಎಂದು ತಿಳಿಸಿದ ಚಿತ್ರದ ನಿರ್ದೇಶಕರೂ ಆಗಿರುವ ಪ್ರಕಾಶ್ ರೈ ಸದ್ಯದಲ್ಲೇ ಧ್ವನಿಸುರುಳಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
    ಹಂಸಲೇಖ ಅವರ ಗೀತರಚನೆ ಹಾಗೂ ಸಂಗೀತವಿರುವ ಈ ಚಿತ್ರಕ್ಕೆ ಅನಂತ್ ಅರಸ್ ಛಾಯಾಗ್ರಹಣವಿದೆ. ಜೋನಿಹರ್ಷ ಸಂಕಲನ, ದಿನೇಶ್ ಮಂಗಳೂರು ಕಲೆ, ಮದನ್ ಹರಿಣಿ ನೃತ್ಯ ಹಾಗೂ ಗಂಗು ಅವರ ನಿರ್ಮಾಣ ನಿರ್ವಹಣೆಯಿರುವ ‘ನಾನು ನನ್ನ ಕನಸು ಚಿತ್ರದ ತಾರಾಬಳಗದಲ್ಲಿ ಪ್ರಕಾಶ್ ರೈ, ಅಮೂಲ್ಯ, ಅಚ್ಯುತಕುಮಾರ್, ವೀಣಾಸುಂದರ್, ಸಿತಾರ, ರಾಜೇಶ್ ಹಾಗೂ ಸಿಹಿಕಹಿಚಂದ್ರು ಇದ್ದಾರೆ. ನಾಯಕ ರಮೇಶ್ ಅರವಿಂದ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

GALLERY
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed